Wednesday, April 08, 2009

ಪಕ್ಷ ವಿ-ಪಕ್ಷಗಳಿಗೆ

ಚುನಾವಣಾ ದಿನಾಂಕ ಪ್ರಕಟಗೊಂಡಿದೆ, ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ನಂತರದ ಹಾಗು ಚುನಾವಣಾ ಪೂರ್ವ ಹೋಂದಾಣಿಕೆಗಳನ್ನು ಬಹುತೇಕ ನಿಶ್ಚಯಿಸಿ ತಮ್ಮ ಎದುರಾಳಿಗಳನ್ನು ಜರಿಯುವ ಕಾರ್ಯಗಳನ್ನು ಆರಂಭಿಸಿಯೂ ಆಗಿದೆ. ವಿಪಕ್ಷಗಳ ಧುರೀಣರನ್ನು ತನ್ನತ್ತ ಸೆಳೆಯುವ ಹಗ್ಗ ಜಗಾಟದಲ್ಲಿ ಎಲ್ಲಾ ಪಕ್ಷಗಳು ನಾ ಮುಂದು ತಾ ಮುಂದು ಎನ್ನುತ್ತಿವೆ. ಅವರು ಕೋಮುವಾದಿಗಳು, ಇವರು ದೇಶವನ್ನು ಮಾರಿದವರು ಎಂದು ಒಬ್ಬರನೋಬ್ಬರು ಹೀಗಳೆಯುವುದನ್ನು ಪ್ರತಿ ದಿನ ನಾವೂ ಸುಧ್ಧಿ ಮಾಧ್ಯಮಗಳಲ್ಲಿ ಓದುತ್ತಿದೇವೆ, ನೋಡುತ್ತಿದೇವೆ. ಕೂಸು ಹುಟ್ಟುವ ಮುನ್ನ ಕುಲ ಹುಡುಕಿದ ಹಾಗೆ ಎಲ್ಲಾ ಮಹಾ ಒಕ್ಕೂಟಗಳು ತಮ್ಮ ನಾಯಕ ಯಾರಾಗಬೇಕೆಂದು ತಮ್ಮ ಲಾಭಕ್ಕೆ ಅನುಗುಣವಾಗಿ ನೇಮಿಸಿದೆ. ವಿಶಾಲ ಭಾರತದ ಸಾಮಾನ್ಯ ಪ್ರಜೆಗೆ "ಯಾರು ಹಿತವರು ನಿನಗೆ ಈ ಮೂವರೊಳಗೆ" ಎನ್ನುವ ಪರಿಸ್ಥಿತಿ ಮತ್ತೆ ನಿರ್ಮಾಣವಾಗಿದೆ. ಅಂದು ಭಾರತ ಪ್ರಕಾಶಿಸುತ್ತಿದ್ದರೆ, ಇಂದು ಭಾರತ ನಿರ್ಮಾಣದ ಕನಸು ಕಟ್ಟಲಾಗುತ್ತಿದೆ. ಚುನಾವಣಾ ಪೂರ್ವ ದಿನದ ಪ್ರಚಾರ ಕಾರ್ಯಕ್ಕೆ ಈಗಿನಿಂದಲೆ ಸಿದ್ದತೆಗಳು ಭರದಿಂದ ಸಾಗಿದೆ. ಇವುಗಳನ್ನು ನೋಡಿ, ಚುನಾವಣಾ ಆಯೋಗ ಮೂಕಾಗಿದೆ, ಮಂಕಾಗಿದೆ.
ಆಲದ ಮರದಂತಿದ್ದ ಜನತಾ ಪರಿವಾರದ ಬೇರಾದ ಭಾರತೀಯ ಜನಾತಾ ಪಕ್ಷ, ಹಿಂಧುತ್ವ, ರಾಮಜನ್ಮ ಭೂಮಿಯ ಆಸರೆಯೊಂದಿಗೆ ಮೊಳಕೆಯೊಡೆದು, ಹೆಮ್ಮರವಾಗಿ ಬೆಳೆದ ನಂತರ ತಾನು ಏರಲು ಬಳಸಿದ ಏಣಿಯನ್ನೆ ಒದೆಯಲು ಹುನ್ನಾರ ನಡೆಸುತ್ತಿದೆ. ತನ್ನ ಶಕ್ತಿ ಯಾಗಿದ್ದ, ಅದರ ಮೂಲಕ ಇತರರಿಗೆ ಮಾದರಿ ಯಾಗಿದ್ದ ತನ್ನ ಮೂಲ ಕಾರ್ಯಕರ್ತರನ್ನು ಮೂಲೆಗುಂಪುಮಾಡಿ ದಿನಂಪ್ರತಿ ತಾನು ಹೀಗಳೆಯುತ್ತಿದ್ದ ತನ್ನ ವಿರೋಧಿಗಳನ್ನೆಲ್ಲಾ ತನ್ನತ್ತ ಸೆಳೆದು ತನ್ನ ಕಾರ್ಯಕರ್ತರಿಗೆ, ಅದರ ಮೂಲಕ ತನಗೆ ತಾನೆ ಅವಮಾನ ಮಾಡಿಕೊಂಡಿದೆ. ಐದು ವರ್ಷದ ಹಿಂದೆ ತನ್ನ ಸೈಧ್ಧಾಂತಿಕ ವಿರೋಧಿಗಳಾಗಿದ್ದವರು ಇಂದು ಆ ಪಕ್ಷದ ಸಿಧ್ಧಾಂತಕ್ಕೆ ತಲೆಬಾಗಿರುವುದು ಯಕ್ಷ ಪ್ರಶ್ನೆಯೇ ಸರಿ. ೧೯೪೭ರಿಂದ ಇಲ್ಲಿಯ ತನಕ ಶೇಕಡ 90ರಷ್ಟು ಸಮಯ ಆಧಿಪತ್ಯ ನಡಿಸಿದ (ಅಪ)ಕೀರ್ತಿ ಎದುರಿಸುತ್ತಿರುವ ಕಾಂಗ್ರೆಸ್ ಈಗ ಭಾರತ ನಿರ್ಮಾಣದ ಕನಸ್ಸು ಕಾಣುತ್ತಿರುವುದು ನಮ್ಮ ದೇಶದ ವಿಪರ್ಯಾಸವಲ್ಲವೆ? ಸ್ವಾತಂತ್ರ್ಯ ಭಾರತದಲ್ಲಿ ಸ್ವತಂತ್ರವಾಗಿ ನಿರ್ನಯಗಳನ್ನು ಕೈಗೆತ್ತಿಕೊಂಡು, ಆ ನಿರ್ನಯಗಳನ್ನು ಅನುಷ್ಠಾಣಗೊಳಿಸುವ ಎದೆಗಾರಿಕೆ ಆ ಪಕ್ಷದಲ್ಲಿ ಯಾರಿಗೆದೆ. ಗಿಣಿಪಾಠ ಒಪ್ಪಿಸುವ ಅಧಿನಾಯಕಿ, ಮಕ್ಕಳಂತೆ ಪಾಠಕೇಳುವ ನಾಯಕರು, ಕಾರ್ಯಕರ್ತರು. ಇನ್ನು ತೃತೀಯ ರಂಗದ ಬಗ್ಗೆ ಮಾತನಾಡದಿರುವುದೇ ಲೇಸು. ತಮ್ಮ ಒಕ್ಕೂಟದಲ್ಲಿ ಎಷ್ಟು ಪಕ್ಷಗಳು ಊಳಿಯಲಿದೆ ಎನ್ನುವುದು ಅವರಿಗೇ ತಿಳಿದಿಲ್ಲಾ. Operation ಕಮಲದಂತೆ, Operation ತೃತೀಯ ರಂಗ ಆದರೂ ಅಚ್ಚರಿಯೇನಿಲ್ಲಾ.
ಚುನಾವಣೆಯಲ್ಲಿ ಚಿತ್ರತಾರೆಯರನ್ನು, ಕ್ರೀಡಾಪಟುಗಳನ್ನು ಕಣಕ್ಕಿಳಿಸಿ ಗೆಲುವಿನ ಕನಸು ಕಾಣುವ ಪಕ್ಷಗಳಿಗೆ, ತನ್ನ ಭವ್ಯ ಭವಿಷ್ಯಕ್ಕಾಗಿ, ತನ್ನ ದೇಶದ ಸರ್ವತೋಮುಖ ಏಳಿಗೆಗಾಗಿ ಕನಸು ಕಾಣುವ ಸಾಮನ್ಯ ನಾಗರೀಕನಿಗೆ ಕಣಕ್ಕಿಳಿಸುವ ಎದೆಗಾರಿಯನ್ನು ಏಕೆ ತೋರುವುದಿಲ್ಲಾ? ಚುನಾವಣೆ ಪೂರ್ವದಲ್ಲಿ ಬದಲಾವಣೆಗಾಗಿ ಮತಕೇಳುವ ಪಕ್ಷಗಳು, ಬದಲಾವಣೆಯಾದನಂತರ ಹಿಂದಿನ ಸರ್ಕಾರಗಳ ದುರಾಡಳಿತ, ದಿವ್ಯ ನಿರ್ಲಕ್ಷ್ಯಗಳ ಬಗ್ಗೆ ಮಾತಾಡುವುದೇಕೆ? ಜಾತಿ ಬಲ, ಹಣಬಲದಿಂದ ಮಾತ್ರಾ ಗೆಲುವೆ? ಎಳ್ಳಷ್ಟು ಸಾಧಿಸಿ, ಬೆಲ್ಲದಷ್ಟು ಬೀಗುವ ಪಕ್ಷಗಳ ಅಭಿವೃಧ್ಧಿ ಕಾರ್ಯಗಳನ್ನು ಅವರೇ ಮೆಚ್ಚಿ ಬೆನ್ನು ತಟ್ಟಿಕೊಳ್ಳಬಹುದೇ? ಏನು ಸಾಧನೆ ಮಾಡದೆ ಚುನಾವಣೆ ಬಂದಾಗ ನೀಡಿದ ಭರವಸೆಗಳ್ಳೆಲ್ಲವನ್ನು ಈಡೇರಿಸಿದ್ದೇವೆ ಎನ್ನುವ ಪಕ್ಷಗಳು ತಮ್ಮ ಆತ್ಮಾವಲೋಕನ ಮಾಡಿಕೊಳ್ಳುವುದೆಂದು? ಸ್ವ-ಪ್ರತಿಷ್ಠೆಯನ್ನು ಬದಿಗಿರಿಸಿ ದೇಶಾಭಿಮಾನವನ್ನು ನಮ್ಮ ನಾಯಕರಲ್ಲಿ ಬೆಳೆಸುವವರಾರು? ಈ ದೇಶದ ಅಭಿವೃಧ್ಧಿ ತಮ್ಮೀಂದ ಮಾತ್ರ ಸಾಧ್ಯ ಎನ್ನುವ ಪಕ್ಷಗಳು ತಾನು ಆಳುತ್ತಿರುವ ರಾಜ್ಯಗಳಲ್ಲಿ ಆ ಸಾಧನೆ ಮಾಡಿಲ್ಲವೇಕೆ? ಒಬ್ಬರು ರಾಜ್ಯ್ ಸರ್ಕಾರದ ದಿವ್ಯ ನಿರ್ಲಕ್ಷ್ಯ ಎಂದರೆ, ಮತ್ತೊಬ್ಬರು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಎನ್ನುತಾರೆ. ಅಧಿಕಾರಕ್ಕೆ ಬರುವ ಮುನ್ನ ಈ ಅಡ್ಡಿಗಳ ಆತಂಕವಿರಲಿಲ್ಲವೇ?
ಕಳೆದ ಕೆಲವು ವರ್ಷಗಳಿಂದ ಚುನಾವಣಾ ಪ್ರಕ್ರಿಯಿಗಳಲ್ಲಿ ಆಗೀರುವ ಒಂದು ಗಮನಾರ್ಹ ಹಾಗು ಪ್ರಶಂಶನಾರ್ಹ ಬದಲಾವಣೆಯೆಂದರೆ ಚುನಾವಣಾ ಪ್ರಣಾಳಿಕೆ. ಬರಿಯ ಆಡು ಭಾಷೆಯಲ್ಲಿ, ಹಾಗೂ ಕ್ಷೇತ್ರಾವಾರು ಹರಿದು ಬರುತ್ತಿದ್ದ ಚುನಾವಾಣಾ ಆಶ್ವಾಷಣೆಗಳು, ಆಡುವ ಜನರ ಬಯಿಗೆ ಆಹಾರವಾದಾಗಿನಿಂದ, ಪ್ರಣಾಳಿಕೆ, ಎಲ್ಲಾ ರಾಜಕೀಯ ಪಕ್ಷಗಳ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ಚುನಾವಣೆ ಮರುಕಳಿಸಿರುವ ಕಾರಣ ಶೃಜನಶೀಲ ವ್ಯಕ್ತಿಗಳ ನಿರುಧ್ಯೋಗ ಸಮಸ್ಯೆಗೆ ಅಲ್ಪವಿರಾಮ ಬಿದ್ದಂತಾಗಿದೆ ಹಾಗೂ ಅದು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ಒಂದು ರಾಜ್ಯ, ಒಂದು ದೇಶದ ಏಳಿಗೆಗೆ(?) ಒತ್ತು ನೀಡಿವೆ. ವರ್ಣರಂಜಿತ ಮುಖಪುಟದೊಂದಿಗೆ ಈಗ ನಮ್ಮ ನಿಮ್ಮೆಲ್ಲರ ಕೈ ಸೇರಿದೆ. ಆದರೆ ಇವೆಲ್ಲಾ ಕೇವಲ ಭರವಸೆಯೆ ಹೊರೆತು, ಅದನ್ನು ಸಾಧಿಸಲು ತಾನು ಇಂತಹ ಕ್ರಮಗಳನ್ನು ಕೈಗೆತ್ತಿಕೊಳ್ಳುವುದಾಗಿ ಯಾವ ಪಕ್ಷಗಳು ಪ್ರಕಟಿಸಿಲ್ಲಾ. ಏಕೆಂದರೆ ಅದು ಈಡೇರಿಸಲಾಗದ ಭರವಸೆಗಳು, ಹಾಗೂ ದಿನಬೆಳಗಾಗುವುದರೊಳಗೆ ಜನ ನಿರ್ಲಕ್ಷಿಸುವ ಮಾತುಗಳು ಎಂದು ಎಲ್ಲಾ ರಾಜಕೀಯ ಪಕ್ಷಗಳಿಗೂ ಅರಿತಿವೆ. ಕುಡಿಯಲು ಊಚಿತವಾಗಿ ನಿರೂ ದೊರೆಯದ ಈ ಕಾಲದಲ್ಲಿ, ಬಿಪಿಲ್ ಕಾರ್ಡ್ ಹೊಂದಿರುವವರಿಗೆ ಕೆಜಿಯೊಂದಕ್ಕೆ ೩ರೂಗಳಲ್ಲಿ ಅಕ್ಕಿ ಕೊಡಲು ಹೇಗೆ ಸಾಧ್ಯ. ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯದ ಕೊರತೆ ಎದುರಿಸುತ್ತಿರುವ ನಮ್ಮ ಹಳ್ಳಿಯ ಜನರಿಗೆ ಬ್ರಾಡ್ ಬ್ಯಾಂಡ್ ನೀಡಿದರೆ ಏನು ಭಾಗ್ಯ. ದೇಶದಲ್ಲಿರುವ ಪೋಲೀಸ್ ಎಲ್ಲಾ ರಾಜಕೀಯ ವ್ಯಕ್ತಿಗಳ ಭದ್ರತೆಗೆ ಸಾಲದಾದಾಗ ಪ್ರತಿ ನಾಗರೀಕನಿಗೂ ಸುರಕ್ಷತೆ ಹಾಗೂ ಭದ್ರತೆ ಸಾಧ್ಯವೇ. ದೇಶದ ಬೆನ್ನೆಲುಬಾದ ರೈತನ ಮುಗ್ಧತೆಯ ಮೇಲೆ ಸವಾರಿ ನಡೆಸುತ್ತಲೇ ಬಂದಿರುವ ಪಕ್ಷಗಳು ರೈತನ ಕುಟುಂಬಕ್ಕೆ ಯಾವ ವಿಶೇಷ ಯೋಜನೆಗಳನ್ನು ಕಲ್ಪಿಸುತ್ತಿದೆ. ಅಧಿಕಾರದಲ್ಲಿದ್ದಾಗ ಜಾರಿಗೆ ತರಲಾಗದ ಮಹಿಳಾ ಮೀಸಲು ವಿಧೇಯಕವನ್ನು ಮತ್ತೆ ಅಧಿಕಾರ ಬಂದರೆ ಜಾರಿ ಗೊಳಿಸುತಾರೆ ಎಂದು ನಂಬಲು ಆದೀತೆ. ಪಕ್ಷವಾರು ಪ್ರಣಾಳಿಕೆಗೂ, ಒಕ್ಕೂಟದ ಪ್ರಣಾಳಿಕೆಗೂ ತಾಳ ಮೇಳವೇಕಿರುವುದಿಲ್ಲಾ. ಯಾರು ಏನೆ ಹೇಳಿದರು ಪಕ್ಷಗಳು ಚುನಾವಣೆ ಎದುರಿಸುತ್ತಿರುವುದು ಹಾಗೂ ನಂತರ ಅಧಿಕಾರ ಹಂಚಿಕೊಳ್ಳುವುದು ಒಕ್ಕೂಟಗಳ ಅಡಿಯಲ್ಲೇ. ನೀವು ನೀಡಿದ ಭರವಸೆಗಳನ್ನು ಈಡೇರಿಸಲು ನಿಮ್ಮ ಮಿತ್ರ ಪಕ್ಷಗಳಲ್ಲಿ ಸಹಮತವಿಲ್ಲ ಎನ್ನುವ ನಗ್ನ ಸತ್ಯ ನಿಮಗೆ ಅರಿವಿಲ್ಲವೇ. ನಾವೆಲ್ಲರೂ ಒಂದೇ, ಜಾತಿ ಒಂದೇ, ಮತ ಒಂದೇ ಎನ್ನುವಾಗ, ಮತ ಹಾಕುವ ಸಮಯದಲ್ಲಿ ಜನರ ನಡುವೆ ಮತೀಯ ಭಾವನೆಗಳನ್ನು ಮೂಡಿಸುವುದೇಕೆ.
ಆದರೂ, ಚುನಾವಣೆ ಬಂದಿದೆ. ಮತ ಹಾಕುತ್ತೇವೆ. ಆಳಿರುವ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಜನ ತನ್ನ ಸಾಧನೆ ಮೆಚ್ಚಿ ಮತ್ತೆ ಆಶಿರ್ವಧಿಸಿದಾರೆ ಎನ್ನುತ್ತಾರೆ. ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ ಅದು ಅಧಿಕಾರಿ ವಿರೋಧಿ ಅಲೆಯಾಗಿರುತ್ತದೆ. ಯಾರಾದರೋಬ್ಬರು ಪ್ರಧಾನಿ ಆಗುತಾರೆ, ಮಂತ್ರಿಗಳಾಗುತಾರೆ. ಭರವಸೆಗಳು ಭರವಸೆಗಳಾಗೆ ಊಳಿಯುತ್ತದೆ. ಭರವಸೆ ಈಡೇರಿದರೆ ಮುಂದಿನ ಚುನಾವಣೆಗೆ ಎಲ್ಲಿ ಬೆಲೆ. ಈಗಿನ ಪರಿಸ್ಥಿಯಲ್ಲಿ ಯಾರು ಏನೇ ಮಾಡಲಿ, ಐದು ವರ್ಷ ಅಧಿಕಾರ ನಡೆಸಲಿ ಎನ್ನುವಂತಾಗಿದೆ. ದೈನಂದಿನ ಖರ್ಚಿನ ಮಧ್ಯೆ ಚುನಾವಣಾ ವೆಚ್ಚವೂ ನಾಗರೀಕನ ಮೇಲೆ ಬೀಳಬಾರದಲ್ಲವೇ.
ಜೈ ಹೋ

No comments: