Sunday, September 09, 2007

ತಮಿಳರಿಗೆ ತಮ್ಮ ಭಾಷೆ ಬೆಣ್ಣೆ, ಸುಮ್ಮನೆ ಕೂತೋರಿಗೆ ಹಿಂದಿ ಸುಣ್ಣ!


ನಮ್ಮ ದೇಶದಲ್ಲಿ ಸಮಾನತೆಯೇ ಜೀವಾಳ ಅಂತ ನೀವೇನಾದ್ರೂ ನಂಬ್ಕೊಂಡಿದ್ರೆ ಭಾರತ ಸರ್ಕಾರ ಹೊರಡ್ಸಿರೋ ಆಡಳಿತ ಭಾಷಾ ಕಾಯ್ದೆ ಒಮ್ಮೆ ನೋಡಿ, ಅಬ್ಬಬ್ಬಬ್ಬಬ್ಬಾ ಎಷ್ಟು ಸಮಾನತೆ ಇದೆ, ಏನು ಕತೆ ಅಂತ! ಹಿಂದಿ ಹೇರಕ್ಕೇಂತ್ಲೇ ಮೀಸಲಾಗಿರೋ ಕೇಂದ್ರಸರ್ಕಾರದ "ಆಡಳಿತ ಭಾಷೆ ವಿಭಾಗ" ಹಿಂದಿ ಹೇರೋದಕ್ಕೆ ಹಾಕಿಕೊಂಡಿರೋ ನಿಯಮಗಳ್ನ ಹೇಳುವಾಗ ಏನ್ ಹೇಳತ್ತೆ ನೋಡಿ:
1. Short title, extent and commencement -(i) These rules may be called the Official Languages (Use for Official Purposes of the Union) Rules, 1976.(ii) They shall extend to the whole of India, except the State of Tamilnadu.(iii) They shall come into force on the date of their publication in the Official Gazette.
ಮೊದಲಲ್ಲೇ ನಮ್ಮ ಕಣ್ಣಿಗೆ ರಾಚೋದು, ಈ ಕಾಯ್ದೆ ತಮಿಳುನಾಡಿಗೆ ಅನ್ವಯ ಆಗೋಲ್ಲಾ ಅನ್ನೊ ಸಾಲು. ಯಾಕೆ? ಯಾವ ಒತ್ತಡಕ್ಕೆ ಮಣಿದು ಹೀಗೆ ತಮಿಳುನಾಡಿಗೆ ಹಿಂದಿ ಹೇರಿಕೆ ಅನ್ವಯಿಸೋದಿಲ್ಲ ಅನ್ನೋ ನಿಯಮ? ನಮ್ ರಾಜಕಾರಣಿಗಳು ಇದನ್ನ ಕರ್ನಾಟಕಕ್ಕೆ ಯಾಕೆ ದೊರಕಿಸಿಕೊಟ್ಟಿಲ್ಲ ಅಂತ ಯೋಚ್ನೆ ಮಾಡು ಗುರು!ಅವ್ರು ಇದನ್ನ ಪಡ್ಕೊಂದಿರೋದಕ್ಕೆ ನೇರವಾಗಿ ಕಾಣೊ ಕಾರಣ ತಮ್ನ ತಾವೇ ಆಳ್ಕೊಳ್ಳೋಕೆ ಅಂತಲೇ ಅಲ್ಲಿ ಪ್ರಾದೇಶಿಕ ಪಕ್ಷಗಳಾಗಿರೋದು. ಇಂಥ ಅಧಿಕಾರಾನ ನಾವು ಪಡ್ಕೊಳ್ಳೋಕೆ ನಮ್ದೇ ಪ್ರಾದೇಶಿಕ ಪಕ್ಷಗಳು ಬೇಕು ಅನ್ನೋದು ಸ್ಪಷ್ಟ ಗುರು!ನಮ್ ಬೆಂಗಳೂರಿರಲಿ, ಚಾಮರಾಜನಗರದಲ್ಲಾಗಲೀ, ಹಿಂದಿಯ ಸೋಂಕೇ ಇಲ್ಲದ ಒಳನಾಡಿನ ಊರುಗಳಲ್ಲಾಗಲಿ, ಅಲ್ಲಿನ ಅಂಚೆ ಕಚೇರಿ, ರೇಲ್ವೆ ನಿಲ್ದಾಣ, ದೂರವಾಣಿ ಕಚೇರಿ - ಈ ಥರದ ಯಾವುದೇ ಕೇಂದ್ರ ಸರ್ಕಾರಿ ಕಚೇರೀಲಿ, ಯಾರಾದ್ರೂ ಹಿಂದಿ ಭಾಷೇಲಿ ಒಂದು ಮನವಿ/ದೂರು ಕೊಟ್ಟರೆ ಅದಕ್ಕೆ ಉತ್ತರಾನ ಹಿಂದೀಲೇ ಕೊಡಬೇಕು ಅನ್ನುತ್ತೆ ಈ ಕಾನೂನು.ಈ ಥರ ಕಾನೂನಿನಿಂದ ಏನು ಅನುಕೂಲಾನಪ್ಪಾ ಅಂದ್ರೆ ಹಿಂದಿ ಮಾತಾಡೋನು ದೇಶದ ಯಾವ ಮೂಲೇಲಿ ಬೇಕಾದ್ರೂ ನೆಮ್ಮದಿಯಾಗಿ ಬದುಕ್ಬೋದು.ಈ ದೇಶ ಇರೋದು ಬರೀ ಹಿಂದಿ ಮಾತಾಡೊ ಜನಾ ನೆಮ್ಮದಿಯಾಗ್ ಬಾಳಕ್ಕೆ ಅಂತ ಅರ್ಥಾನಾ ಗುರು? ಇದು ನಿಜವಾದ ಪ್ರಜಾಪ್ರಭುತ್ವಾನಾ? ಪ್ರಜೆಗಳು ಕನ್ನಡದೋರು, ಪ್ರಭುಗಳು ಹಿಂದಿಯೋರು ಅಂತಾನಾ ಅರ್ಥ?

1 comment:

Unknown said...

Registration- Seminar on KSC's 8th year Celebration


Dear All,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends